Contact Us

ಜಾಗತಿಕ ಮಟ್ಟಕ್ಕೆ ನಿಮ್ಮ ನೆಚ್ಚಿನ "ಕೋಲಾರವಾಣಿ"....!!!

www.kolaravaniepaper.com

ಕಳೆದ 45 ವರ್ಷಗಳ ಹಿಂದೆ ಅಂದರೆ 1987ರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ.ಪಟ್ಟಾಭಿರಾಮನ್‌ ಅವರ ಆಶೋತ್ತರಗಳಿಗೆ ಪ್ರತಿಯಾಗಿ ಆರಂಭಗೊಂಡ "ಕೋಲಾರವಾಣಿ" ಇಂದು ಜನಪ್ರಿಯ ಪ್ರಾದೇಶಿಕ ಕನ್ನಡ ದಿನಪತ್ರಿಕೆಯಾಗಿ ರಾಜ್ಯದ ಹತ್ತು ಜಿಲ್ಲೆಗಳನ್ನು ತಲುಪುತ್ತಿದೆ.


ಕೋವಿಡ್-‌19ರ ಸಂದರ್ಭದಲ್ಲೂ ಸತತವಾಗಿ ಪ್ರಕಟಗೊಳ್ಳುವ ಮೂಲಕ ಓದುಗರಲ್ಲಿ ಜಾಗೃತಿ ಮೂಡಿಸಿ ನೈಜ ಸುದ್ದಿಯನ್ನು ಮಾತ್ರ ತಲುಪಿಸಿದ ಹೆಗ್ಗಳಿಕೆಯೊಂದಿಗೆ ವರ್ಣರಂಜಿತ ಮುದ್ರಣದೊಂದಿಗೆ ಅಪರೂಪ ಮತ್ತು ಆಕರ್ಷಕ ವಿನ್ಯಾಸದ ಜತೆ ಜತೆಗೆ ಆಯ್ದ ಸಮತೋಲಿತ ಸುದ್ದಿಗಳೊಂದಿಗೆ "ಜನಪ್ರಿಯ" ಎಂಬ ಹಣೆ ಪಟ್ಟಿಯೊಂದಿಗೆ ಪ್ರಕಟಗೊಳ್ಳುತ್ತಿರುವ "ಕೋಲಾರವಾಣಿ" ಒಂದಿಗೂ ಓದುಗನ ಪತ್ರಿಕೆಯಾಗಿ ಪ್ರಕಟಗೊಳ್ಳುತ್ತಿದೆ.


ವಿಶೇಷ ಸಂದರ್ಭಗಳಲ್ಲಿ ದೊಡ್ಡ ಪತ್ರಿಕೆಗಳಿಗೆ ಸರಿ ಸಮನಾಗಿ ವಿಶೇಷ ಸಂಚಿಕೆ ರೂಪಿಸುವ ಮೂಲಕ ಸೈ ಎನಿಸಿಕೊಂಡಿರುವ "ಕೋಲಾರವಾಣಿ" ಬದಲಾದ ಸಮಾಜ ಮತ್ತು ತಾಂತ್ರಿಕತೆಗೆ ಅನುಗುಣವಾಗಿ ಡಿಜಿಟಲ್‌ ಪತ್ರಿಕೋದ್ಯಮದಲ್ಲೂ ತನ್ನ ಛಾಪು ಮೂಡಿಸಿದೆ. ಇದಕ್ಕೆ ಪ್ರತಿಯಾಗಿ ಪತ್ರಿಕೆ ಪ್ರತ್ಯೇಕ ವೆಬ್‌ಸೈಟ್‌ ಮೂಲಕ ವಿಶ್ವದೆಲ್ಲೆಡೆ ಲಭ್ಯವಾಗುತ್ತಿದೆ ಮಾತ್ರವಲ್ಲದೆ, ಇ-ಪೇಪರ್‌ ಮೂಲಕ ಮುದ್ರಿತ ಪ್ರತಿಯನ್ನು ಯಥಾವತ್ಥಾಗಿ ವಿಶ್ವದಾದ್ಯಂತ ಲಭಿಸುತ್ತಿದೆ. ಇದಕ್ಕಾಗಿಯೇ "ಕೋಲಾರವಾಣಿ" www.kolaravaniepaper.com ಅನ್ನು ರೂಪಿಸಿ ಪ್ರತಿ ನಿತ್ಯ ಮುಂಜಾನೆ 8ರ ನಂತರ ಅಂದಿನ ಪತ್ರಿಕೆಯನ್ನು ಇನ್ನಷ್ಟು ಓದುಗರಿಗೆ ಹಂಚುತ್ತಿದೆ.


ಸುಲಭದಲ್ಲಿ ಓದುವ ಮತ್ತು ನಿಮಗೆ ಬೇಕಿರುವ ಸುದ್ದಿಗಳನ್ನು ಹೆಕ್ಕಿ ತೆಗೆಯುವ ಜತೆ ಜತೆಗೆ ಫೇಸ್‌ ಬುಕ್‌, ವಾಟ್ಸ್‌ಪ್‌, ಟ್ವಿಟ್ಟರ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುವ ಸೌಲಭ್ಯದೊಂದಿಗೆ ಇದೀಗ "ಕೋಲಾರವಾಣಿ" ಇಡೀ ಜಗತ್ತಿಗೇ ತನ್ನನ್ನು ತೆರೆದುಕೊಂಡಿದೆ.


-ಸಂಪಾದಕ

Firm: Kolaravani ::: A Popular Regional Kannada Daily Sice: 1978
kolarmurali@gmail.com
kolaravani@gmail.com

www.kolaravani.com